ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ(ನೋಂ)ವು ಕರ್ನಾಟಕ ಸರ್ಕಾರ ಸಹಕಾರ ಇಲಾಖೆಯ ಕರ್ನಾಟಕ ಸಂಘಗಳ ನೋಂದಣಿ ಕಾಯಿದೆ 1960ರ ಮೇರೆಗೆ ನೋಂದಣಿ ಸಂಖ್ಯೆ: ಎಸೆಓಆರ್/ಬಿಎಲ್‍ಯು/ಡಿಆರ್/1268/2010-11 ರಂತೆ ನೋಂದಣಿಯಾದ ಸಂಘವಾಗಿರುತ್ತದೆ. ರಾಜ್ಯದಲ್ಲಿರುವ 6021 ಗ್ರಾಮಪಂಚಾಯಿತಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಈ ವೃಂದದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಕುಂದ ಕೊರತೆಗಳನ್ನು ಪರಿಹರಿಸಲು ಹಾಗೂ ಇಲಾಖೆ ಅಭಿವೃದ್ದಿ ಸಲಹೆ ಸೂಚನೆಗಳನ್ನು ನೀಡಲು ಮತ್ತು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ಕೇಮಾಭಿವೃದ್ದಿಗಾಗಿ ಈ ಸಂಘವು ಅಧಿಕೃತವಾಗಿ ಸಹಕಾರ ಇಲಾಖೆಯ ಮುಖಾಂತರ ಚುನಾವಣೆಯನ್ನು ನಡೆಸುವ ಮೂಲಕ ಅಸ್ತಿತ್ವಕ್ಕೆ ಬಂದಿರುತ್ತದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತ ಸದಸ್ಯರ ಒಕ್ಕೂಟ, ಬೆಂಗಳೂರು ಇವರ ಸಹಯೋಗದಲ್ಲಿ ಅಕ್ಟೋಬರ್ ೪ರಂದು ಅನಿರ್ದಿಷ್ಟಾವಧಿ ಹೋರಾಟ. ಸ್ಥಳ: ಫ್ರೀಡಂ ಪಾರ್ಕ, ಬೆಂಗಳೂರು.ು.
ರಾಜ್ಯಾಧ್ಯಕ್ಷರಾದ ಶ್ರೀ ರಾಜುವಾರದ ರವರ ಅಧ್ಯಕ್ಷತೆಯಲ್ಲಿ "ರಾಜ್ಯ ಪರಿಷತ್ ಸಭೆ". ದಿನಾಂಕ: ೦೮-೧೦-೨೦೨೩ ನೇ ಭಾನುವಾರ, ಸಮಯ: ಬೆಳಗ್ಗೆ ೧೧ ಕ್ಕೆ, ಸ್ಥಳ: ಹೋಟೆಲ್ ಮಾಗಜಿ, ಆರ್ಚಿಡ್ ನಂ: ೦೩ ನಾಗಪ್ಪ ಸ್ಟಿçÃಟ್ ಕಾಲೇಜ್ ರಸ್ತೆ ಶೇಶಾಧ್ರಿಪುರಂ, ಬೆಂಗಳೂರು.